ರಾಜ್ಯ

  • 'ಮತ್ತೊಂದು ಸರ್ಜಿಕಲ್ ದಾಳಿಗೆ ಒತ್ತಾಯಿಸಿ ಮಂಗಳೂರಿನಲ್ಲಿ ವಿಎಚ್ ಪಿ ಬಜರಂಗದಳ ಪ್ರತಿಭಟನೆ'

    'ಮಂಗಳೂರು, ಫೆಬ್ರವರಿ 15:ಸರ್ಜಿಕಲ್ ದಾಳಿ ಹಾಗೂ ಭಾರತೀಯ ಸೇನೆ ಕಾಶ್ಮೀರದಲ್ಲಿ ಆರಂಭಿಸಿದ್ದ ಆಪರೇಷನ್ ಆಲ್ ಔಟ್ ಬಳಿಕ ಹೆದರಿ ಭೂಗತರಾಗಿದ್ದ ಪಾಕ್ ಪ್ರೇರಿತ ಉಗ್ರರು ಸಿ ಆರ್ ಪಿ ಎಫ್ ಯೋಧರ ವಾಹನದ ಮೇಲೆ ನಡೆಸಿದ ದಾಳಿಗೆ ದೇಶದೆಲ್ಲೆಡೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಜೈಷ್ ಎ-ಮೊಹಮ್ಮದ್ ಸಂಘಟನೆಯ ಉಗ್ರನೋರ್ವ ಸಿಆರ್ ಪಿಎಫ್ ವಾಹನವನ್ನು ಗುರಿಯಾಗಿಸಿಕೊಂಡು ನಡೆಸಿದ ಆತ್ಮಾಹುತಿ ದಾಳಿಗೆ 42 ಯೋಧರು ಹುತಾತ್ಮರಾಗಿದ್ದಾರೆ. ಉಗ್ರರ ಈ ಪೈಶಾಚಿಕ ಕೃತ್ಯದ ವಿರುದ್ಧ ದೇಶದಲ್ಲಿ ರಕ್ತ ಕುದಿಯತ್ತಿದೆ. ಹುತಾತ್ಮ ಯೋಧ ಗುರುವಿನ ಮನೆಗೆ ಬಾರದ ಜನಪ್ರತಿನಿಧಿಗಳ ವಿರುದ್ಧ ಆಕ್ರೋಶ ಕಾಶ್ಮೀರದಲ್ಲಿ ಜೈಷ್ ಎ ಮೊಹಮದ್ ಉಗ್ರರು ನಡೆಸಿದ ಆತ್ಮಾಹುತಿ ದಾಳಿಯಲ್ಲಿ ಹುತಾತ್ಮರಾದ ವೀರಯೋಧರಿಗೆ ಸಂತಾಪದ ಮಹಾಪೂರವೇ ಹರಿದು ಬರುತ್ತಿದೆ. ಈ ನಡುವೆ ಉಗ್ರರಿಗೆ ತಕ್ಕ ಪಾಠ ಕಲಿಸಲು ಸರ್ಜಿಕಲ್ ಸ್ಟ್ರೈಕ್ ದಾಳಿ ನಡೆಸುವಂತೆ ಒತ್ತಾಯ ಕೇಳಿ ಬರುತ್ತಿದೆ.'

Latest postComments: