Latest post

Flash News

  • ವಾಟ್ಸಾಪ್ ಹೊಸ ಫೀಚರ್ ಬಿಡುಗಡೆ!

    'ಸಾಮಾಜಿಕ ಜಾಲತಾಣಗಳಲ್ಲಿ ಫೆಸ್ಬುಕ್ ಹಾಗು ವಾಟ್ಸಾಪ್ ಮುಂಚೂಣಿಯಲ್ಲಿದ್ದು, ಇವು ತಮ್ಮ ಬಳಕೆದಾರರಿಗೆ ಹೊಸ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಿರುತ್ತವೆ. ಇದೀಗ ವಾಟ್ಸಾಪ್ ಸಂಸ್ಥೆ ಸ್ಟಿಕ್ಕರ್, ಪಿಐಪಿ ಮೋಡ್, ಬಯೋಮೆಟ್ರಿಕ್ ದೃಢೀಕರಣ ಸೇರಿದಂತೆ ಅನೇಕ ವೈಶಿಷ್ಟ್ಯಗಳನ್ನು ಪರಿಚಯಿಸಿದ್ದು, ಈಗ ಮತ್ತೊಂದು ಫೀಚರ್ ಪರಿಚಯಿಸಲಿದೆ. ಈ ಹೊಸ ಫೀಚರ್ ನಲ್ಲಿ ಬ್ಯುಸಿನೆಸ್ ಅವಕಾಶ ಹುಡುಕಲು ಸಹಾಯವಾಗಲಿದೆ. ಇದರ ಮಾಹಿತಿಯನ್ನು WABetaInfo ನೀಡಿದೆ. ಇದಕ್ಕೆ ಸಂಬಂಧಿಸಿದಂತೆ WABetaInfo ಸ್ಕ್ರೀನ್ ಶಾಟ್ ಒಂದನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ Find Business ಆಯ್ಕೆ ನೀಡಲಾಗಿದೆ. ಇದರಲ್ಲಿ ಹೆಸರು ಅಥವಾ ಬ್ಯುಸಿನೆಸ್ ಆಧಾರದ ಮೇಲೆ ನಿಮಗೆ ಬೇಕಾದದ್ದನ್ನು ಆಯ್ಕೆ ಮಾಡಬಹುದಾಗಿದೆ. ಈ ಆಯ್ಕೆ Android 2.19.47 ವರ್ಷನ್ ನಲ್ಲಿಇರಲಿದೆ.'


Gallary

Videos